ಶನಿವಾರ, ಅಕ್ಟೋಬರ್ 10, 2026 | ಬೆಂಗಳೂರು, ಭಾರತ
ಕೆಬಿ ನ್ಯೂಸ್ ಕರ್ನಾಟಕ

ಕೆಬಿ ನ್ಯೂಸ್ ಕರ್ನಾಟಕ

ಜನರಿಂದ,ಜನರಿಗಾಗಿ, ಜನರಿಗೋಸ್ಕರ
ನಿಷ್ಪಕ್ಷಪಾತ, ನಿಖರ ಮತ್ತು ಸಮಯೋಚಿತ ಸುದ್ದಿ ವರದಿಗಾರಿಕೆ: ಸಕ್ರಿಯ
ಬ್ರೇಕಿಂಗ್ ನ್ಯೂಸ್
ಮುಖ್ಯಾಂಶಗಳು: ₹೧೫,೬೧೧ ಕೋಟಿ ವೆಚ್ಚದ ನಮ್ಮ ಮೆಟ್ರೋ ಹಂತ ೩ ರ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಮಂಜೂರಾತಿ.     •     ಹವಾಮಾನ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ೪೮ ಗಂಟೆಗಳ ಕಾಲ ಭಾರಿ ಮಳೆ ಮುನ್ಸೂಚನೆ.     •     ಕೃಷಿ ಮಾಹಿತಿ: ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಬೆಳೆ ವಿಮೆ ಮತ್ತು ಬಡ್ಡಿರಹಿತ ಸಾಲಕ್ಕೆ ಆನ್‌ಲೈನ್ ನೊಂದಣಿ ಆರಂಭ.
ದೆಹಲಿಯ ಕಬ್ಬು ಬೆಳೆಗಾರರ ಸಭೆಗೆ ಹಾವೇರಿ ಜಿಲ್ಲೆಯ ಪ್ರತಿನಿಧಿ ಭುವನೇಶ್ವರ ಶಿಡ್ಲಾಪುರ
ಶನಿವಾರ, ಅಕ್ಟೋಬರ್ 10, 2026 • ಮಂಜುನಾಥ್ ಎನ್.ಹೆಚ್ • ಬೆಂಗಳೂರು • ಪರಿಶೀಲಿಸಿದ ಸುದ್ದಿ

ದೆಹಲಿಯ ಕಬ್ಬು ಬೆಳೆಗಾರರ ಸಭೆಗೆ ಹಾವೇರಿ ಜಿಲ್ಲೆಯ ಪ್ರತಿನಿಧಿ ಭುವನೇಶ್ವರ ಶಿಡ್ಲಾಪುರ

ಸುದ್ದಿ ಸಾರಾಂಶ: ಹಾವೇರಿ: ಹಾವೇರಿ ಜಿಲ್ಲೆಯಿಂದ ದೆಹಲಿಯಲ್ಲಿ ನಡೆಯುವ ಸಭೆಗೆ 12/ 10/ 2026 ಸೋಮವಾರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಆಹಾರ ಮತ್ತು ಶಿಕ್ಷಣ ಸಚಿವರು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆಯನ್ನು ಕರೆದಿದ್ದಾರೆ ಅದರಲ್ಲಿ ಹಾವೇರಿ ಜಿಲ್ಲೆಯ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರಾದ ಭುವನೇಶ್ವರ ಶಿಡ್ಲಾಪುರ ಹಾಗೂ ಪದಾಧಿಕಾರಿಗಳು ದೆಹಲಿ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದು

ದೆಹಲಿಯ ಕಬ್ಬು ಬೆಳೆಗಾರರ ಸಭೆಗೆ ಹಾವೇರಿ ಜಿಲ್ಲೆಯ ಪ್ರತಿನಿಧಿ ಭುವನೇಶ್ವರ ಶಿಡ್ಲಾಪುರ


ಹಾವೇರಿ: ಹಾವೇರಿ ಜಿಲ್ಲೆಯಿಂದ ದೆಹಲಿಯಲ್ಲಿ ನಡೆಯುವ ಸಭೆಗೆ 12/ 10/ 2026 ಸೋಮವಾರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಆಹಾರ ಮತ್ತು ಶಿಕ್ಷಣ ಸಚಿವರು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆಯನ್ನು ಕರೆದಿದ್ದಾರೆ ಅದರಲ್ಲಿ ಹಾವೇರಿ ಜಿಲ್ಲೆಯ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರಾದ ಭುವನೇಶ್ವರ ಶಿಡ್ಲಾಪುರ ಹಾಗೂ ಪದಾಧಿಕಾರಿಗಳು ದೆಹಲಿ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದು ನಮ್ಮ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ತಮ್ಮ ಸಲಹೆ ಸೂಚನೆಗಳನ್ನು ಏನಾದರೂ ತಿಳಿಸುವುದಿದ್ದರೆ ನಮಗೆ ತಿಳಿಸಿದರೆ ನಾವು ದೆಹಲಿ ಸಭೆಯಲ್ಲಿ ಚರ್ಚಿಸಿ ಹಾವೇರಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರಿಗೆ ಆಗುವ ಅನ್ಯಾಯವನ್ನು ಕೇಂದ್ರ ಸರ್ಕಾರದ ಮುಂದೆ ಇಡಲು ಅನುಕೂಲವಾಗುತ್ತದೆ ನಮ್ಮ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರಿಗೆ ಬಹಳಷ್ಟು ಅನಾನುಕೂಲಗಳಿವೆ ಅವುಗಳನ್ನು ಕೇಂದ್ರ ಸರ್ಕಾರದ ಸಭೆಯಲ್ಲಿ ತಂದು ಹಾವೇರಿ ಜಿಲ್ಲೆಗೆ ನ್ಯಾಯವನ್ನು ಪಡೆದುಕೊಳ್ಳುವ ಸಲುವಾಗಿ ಹೋಗುವ ಸಮಯ ಬಂದಿದ್ದು ತುಂಬಾ ಒಳ್ಳೆಯದಾಗಿದೆ ಹಾಗೆಯೇ ರಾಜ್ಯ ಸರ್ಕಾರದ ಪ್ರತಿನಿಧಿಗಳಾದ ಶ್ರೀ ಲಕ್ಷ್ಮಣ ಸವದಿ ಶ್ರೀ ರುದ್ರಪ್ಪ ಲಮಾಣಿ ಶ್ರೀ ನರೇಂದ್ರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಆ ಸಭೆಯಲ್ಲಿ ಹಾವೇರಿ ಜಿಲ್ಲೆಯಿಂದ ನಾವು ಭಾಗವಹಿಸಿ ರಿಕವರಿಯಲ್ಲಿ ಕಾರ್ಖಾನೆ ಮಾಲೀಕರು ಮಾಡುವ ಮೋಸ ಸರ್ಕಾರದ ವತಿಯಿಂದ ತೂಕದ ಯಂತ್ರ ಕಬ್ಬು ಬೆಳೆಗೆ ಬೆಳೆ ವಿಮೆ ಕಲ್ಪಿಸುವುದು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಉತ್ತರ ಕರ್ನಾಟಕಕ್ಕೆ ಒಂದೇ ದರ ನಿಗದಿಪಡಿಸುವ ಬಗ್ಗೆ ಇನ್ನೂ ಅನೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ

ಸಂಬಂಧಿತ ಪ್ರಮುಖ ಸುದ್ದಿಗಳು
ಸುದ್ದಿಯನ್ನು ಹಂಚಿಕೊಳ್ಳಿ
URL: kbnewskarnataka.com/bhuvaneshwar-shidlapur-to-represent-haveri-district-at-sugarcane-growers-meeting-in-delhi-1-1