ಶಿಗ್ಗಾವಿ ತಾಲೂಕಿನ ಹುಲಗೂರಿನ ಗ್ರಾಮದಲ್ಲಿರುವ ಭಾವೈಕ್ಯತೆಯ ಹಜರೇಷಾ ಖಾದ್ರಿ ದರ್ಗಾದಲ್ಲಿ ಹೆಸ್ಕಾಂ ಇಲಾಖೆಯಿಂದ 12 ಲಕ್ಷ ವೆಚ್ಚದಲ್ಲಿ ನೂತನ ವಿದ್ಯುತ್ ದೀಪಗಳ ಸಂಪರ್ಕಕ್ಕೆ ಹೆಸ್ಕಾಂ ನಿಗಮದ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಚಾಲನೆ ನೀಡಿದರು, ಸುಮಾರು ವರ್ಷಗಳಿಂದ ಇಲ್ಲಿನ ವಿದ್ಯುತ್ ತಂತಿಗಳು ಶಿಥಿಲಾವಸ್ಥೆಗೆ ತಲುಪಿದ್ದವು, ಹೆಸ್ಕಾಂ ಅಧ್ಯಕ್ಷನಾದ ಮೇಲೆ ದರ್ಗಾಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿ ಎಂದು ಒಳ್ಳೆ ಕೆಲಸ ಮಾಡುತಿದ್ದೇನೆ, ಅಲ್ಲದೆ ಸಚಿವ ಸತೀಶ ಜಾರಕಿಹೊಳಿಯವರು ಆರು ಲೈನ್‌ನ ರಸ್ತೆಯ ಸಲುವಾಗಿ 5 ಕೋಟಿ ರೂ. ಮಂಜೂರು ಮಾಡಿದ್ದು ಇದಕ್ಕೆ ಇಲ್ಲಿಯ ಜನಪ್ರತಿನಿಧಿ ಅಡ್ಡಿಪಡಿಸುವ ಕಾರ್ಯ ಮಾಡುತ್ತಿದ್ದಾರೆ ಹಾಗೂ ಇಲ್ಲಿಯ ದರ್ಗಾ ವಿಷಯದಲ್ಲಿ ಹಸ್ತಕ್ಷೆಪ ಮಾಡುತ್ತಿದ್ದಾರೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಅಜ್ಜಮಪೀರ್ ಖಾದ್ರಿ ಆರೋಪ ಮಾಡಿದ್ದಾರೆ
ಮಂಗಳವಾರ, ಜುಲೈ 21, 2026
•
ಮಂಜುನಾಥ್ ಎನ್.ಹೆಚ್
• ಶಿಗ್ಗಾಂವ,
•
ಪರಿಶೀಲಿಸಿದ ಸುದ್ದಿ
₹12 ಲಕ್ಷ ವೆಚ್ಚದ ವಿದ್ಯುತ್ ದೀಪಗಳ ಸಂಪರ್ಕಕ್ಕೆ ಚಾಲನೆ; ದರ್ಗಾ ವಿಚಾರದಲ್ಲಿ ಶಾಸಕರ ಹಸ್ತಕ್ಷೇಪ ಆರೋಪ
ಸುದ್ದಿ ಸಾರಾಂಶ: :ಶಿಗ್ಗಾವಿ ತಾಲೂಕಿನ ಹುಲಗೂರಿನ ಗ್ರಾಮದಲ್ಲಿರುವ ಭಾವೈಕ್ಯತೆಯ ಹಜರೇಷಾ ಖಾದ್ರಿ ದರ್ಗಾದಲ್ಲಿ ಹೆಸ್ಕಾಂ ಇಲಾಖೆಯಿಂದ 12 ಲಕ್ಷ ವೆಚ್ಚದಲ್ಲಿ ನೂತನ ವಿದ್ಯುತ್ ದೀಪಗಳ ಸಂಪರ್ಕಕ್ಕೆ ಹೆಸ್ಕಾಂ ನಿಗಮದ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಚಾಲನೆ ನೀಡಿದರು,